ದಾಕ್ಷಾಯಿಣಿ
ದಕ್ಷರಾಜನ ಪುತ್ರಿಯರೆಲ್ಲ ದಾಕ್ಷಾಯಿಣಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಪುರಾಣಗಳಲ್ಲಿರುವಂತೆ ದಕ್ಷರಾಜ ತನ್ನ ಪುತ್ರಿಯರನ್ನು ಚಂದ್ರ, ಕಶ್ಯಪ, ಧರ್ಮರಿಗೆ ಮದುವೆ ಮಾಡಿಕೊಟ್ಟ. ಆದಿತ್ಯರ ತಾಯಿಯಾದ ಅದಿತಿ, ಗರುಡ ಸರ್ಪಗಳ ತಾಯಂದಿರಾದ ಕದ್ರು, ನಾಳೀಜಂಘನ ತಾಯಿ ಇವರೆಲ್ಲರೂ ದಾಕ್ಷಾಯಿಣಿಯರೇ. ಪುರಾಣಗಳಲ್ಲೂ ಕಾವ್ಯಗಳಲ್ಲೂ ಪ್ರಸಿದ್ಧಳಾಗಿರುವವಳು ಸತಿ ಎಂಬ ಹೆಸರಿನ ದಾಕ್ಷಾಯಿಣಿ. ಈಕೆ ಪಾರ್ವತಿಯ ಅವತಾರ ಶಿವನನ್ನೇ ಮದುವೆಯಾದವಳು. (ನೋಡಿ- ದಕ್ಷ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ